November 29, 2022

ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರೆಲ್ಲ ಬ್ಲಾಕ್ ಮಾಡಿದ್ದಾರೆಂದು ತಿಳಿಯಬೇಕೇ?: ಇಲ್ಲಿದೆ ಸುಲಭ ಟ್ರಿಕ್ಸ್

ಇಂದು ವಾಟ್ಸ್​ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್​ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ನಾವು ಇನ್ನೊಬ್ಬರನ್ನು ಅಥವಾ ನಮ್ಮನ್ನು ಮತ್ತೊಬ್ಬರು ವಾಟ್ಸ್​ಆ್ಯಪ್​​ನಲ್ಲಿ ಬ್ಲಾಕ್ (WhatsApp Block) ಮಾಡುವ ಸಂದರ್ಭಗಳು ಬರುತ್ತವೆ. ಹೀಗೆ ನಿಮ್ಮನ್ನು ಬೇರೆಯವರು ಬ್ಲಾಕ್ ಮಾಡಿದ್ದರೆ?, ಅದನ್ನು ಹೇಗೆ ತಿಳಿಯುವುದು ಎಂಬುದು ಅನೇಕರಿಗೆ ತಿಳಿದಿಲ್ಲ. (Who Blocked Me on Whatsapp) ಈ ಗೊಂದಲಕ್ಕೆ ಇಲ್ಲಿದೆ ಉತ್ತರ.

Telegram Group

ವಾಟ್ಸ್​ಆ್ಯಪ್​​ ಚಾಟ್ ವಿಂಡೋದಲ್ಲಿ ನಮಗೆ ಬೇಕಾದವರ ಲಾಸ್ಟ್ ಸೀನ್ ಅಥವಾ ಆನ್​ಲೈನ್ ಸ್ಟೇಟಸ್ ಪರಿಶೀಲಿಸುವುದರ ಮೂಲಕ ಅವರು ನಮ್ಮನ್ನು ಬ್ಲಾಕ್ ಮಾಡಿದ್ದನ್ನು ತಿಳಿಯಬಹುದು. ಆದರೆ, ಅವರು ತಮ್ಮ ಲಾಸ್ಟ್ ಸೀನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಈ ವಿಧಾನ ಕೆಲಸಕ್ಕೆ ಬರಲಾರದು. ಅಥವಾ ಒಂದೊಮ್ಮೆ ನಿಮ್ಮ ಗೆಳೆಯರೊಬ್ಬರು ನಿಮ್ಮನ್ನು ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುವುದು ನಿಂತು ಹೋಗುತ್ತದೆ. ಆದರೂ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ ಕೆಲ ಸಂದರ್ಭಗಳಲ್ಲಿ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುತ್ತಿರಬಹುದು. ಆದರೆ ಅವರು ತಮ್ಮ ಪ್ರೊಫೈಲ್ ಫೋಟೋ ಅಪ್ಡೇಟ್ ಮಾಡಿದಾಗ ಅದು ನಿಮಗೆ ಕಾಣಿಸಲಾರದು.

ಸುಲಭ ವಿಧಾನ ಎಂದರೆ ವಾಟ್ಸ್​ಆ್ಯಪ್​​ ಗ್ರೂಪ್ ಮಾಡಿ ಚೆಕ್ ಮಾಡುವುದು. ಇದಕ್ಕಾಗಿ ನೀವು ವಾಟ್ಸ್​ಆ್ಯಪ್​​ನಲ್ಲಿ ಹೊಸ ಗ್ರೂಪ್ ವೊಂದನ್ನು ತೆರೆಯಬೇಕು. ನಂತರ ಹೊಸ ಹೆಸರು ನಮೂದಿಸಿದ ಮೇಲೆ ನೆಕ್ಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ. ಇಲ್ಲಿ ನಿಮ್ಮನ್ನು ಬ್ಲಾಕ್ ಮಾಡದವರ ಹೆಸರನ್ನು ಕಂಡುಹಿಡಿದುಕೊಳ್ಳಬಹುದು. ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅವರ ನಂಬರನ್ನು ಸಹ ಸೇರಿಸಿಕೊಳ್ಖಬಹುದು. ಹಾಗೆ ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ. ನೀವು ತೆಗೆದುಕೊಂಡ ನಂಬರ್ ಮೇಲೆ ಮಾಡಿ ಕ್ರೀಯೆಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ. ಕ್ರೀಯೆಟ್ ಮಾಡಿದ ಗ್ರೂಪ್​ಗೆ ನೀವು ತೆಗೆದುಕೊಂಡ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.

ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸ್​ಆ್ಯಪ್​​ ಕಾಲ್ ಮಾಡಲು ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗುವುದಿಲ್ಲ. ಕಾಲ್ ಕನೆಕ್ಟ್ ಆಗುತ್ತಿದೆ ಎಂದು ವಾಟ್ಸ್​ಆ್ಯಪ್​​ ತೋರಿಸಿದರೂ ನಿಜವಾಗಿ ಹಾಗೆ ಆಗುತ್ತಿರುವುದಿಲ್ಲ. ಆದರೆ, ಆ ಕಡೆಯವರು ತಮ್ಮ ಇಂಟರ್ನೆಟ್ ಸಂಪರ್ಕ ಬಂದ್ ಮಾಡಿದ್ದರೂ ಹೀಗೇ ಆಗುತ್ತದೆ. ವಾಟ್ಸ್​ಆ್ಯಪ್​​ನಲ್ಲಿ ನಾವು ಕಳುಹಿಸಿದ ಮೆಸೇಜ್ ಆ ಕಡೆಯವರಿಗೆ ತಲುಪಿದಾಗ ಎರಡು ಟಿಕ್ ಮಾರ್ಕ್ ಕಾಣಿಸುತ್ತವೆ. ಆದರೆ ಒಂದೊಮ್ಮೆ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ್ದಲ್ಲಿ ಒಂದು ಟಿಕ್ ಮಾರ್ಕ್ ಮಾತ್ರ ಕಾಣಿಸುತ್ತದೆ.

Telegram Group
error: Content is protected !!