November 29, 2022

ಶಾಕಿಂಗ್ ನ್ಯೂಸ್: ಸುಶಾಂತ್​ ಸಿಂಗ್​ ರಜಪೂತ್​ರ ಕುಟುಂಬದಲ್ಲಿ ಮತ್ತೊಂದು ದುರಂತ, ಐವರ ದುರ್ಮರಣ

ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಲಖಿಸರಾಯ್​ ಜಿಲ್ಲೆಯಲ್ಲಿ ಟ್ರಕ್​​ಗೆ ಎಸ್​ಯುವಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ರು.

Telegram Group

ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಎಸ್​ಯುವಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಟ್ರಕ್​ ಚಾಲಕ ಹಾಗೂ ಸಹಾಯಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಮೃತ ಪಟ್ಟ ಆರು ಮಂದಿ ಹರಿಯಾಣದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಒ.ಪಿ ಸಿಂಗ್​ ಸಹೋದರಿಯ ಅಂತ್ಯಕ್ರಿಯೆ ಮುಗಿಸಿ ಪಾಟ್ನಾದಿಂದ ಜಮುಯಿಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.

ಒ.ಪಿ ಸಿಂಗ್​ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿಯ ಪತಿ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ಲಾಲ್​ಜೀತ್​ ಸಿಂಗ್​ ( ಮೃತಪಟ್ಟ ಮಹಿಳೆಯ ಪತಿ), ನೆಮಾನಿ ಸಿಂಗ್​, ಅಮಿತ್​ ಶಂಕರ್​ ಅಲಿಯಾಸ್​ ಚಂದ್ರ ಸಿಂಗ್​, ಸುನೀತಾ ದೇವಿ, ಅನಿತಾ ದೇವಿ ಹಾಗೂ ಚಾಲಕ ಚೇತನ್​ ಕುಮಾರ್ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡರವಲ್ಲಿ ಇಬ್ಬರನ್ನು ವಾಲ್ಮಿಕಿ ಸಿಂಗ್​ ಹಾಗೂ ಪ್ರಸಾದ್​ ಕುಮಾರ್​ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮೊದಲು ಸಿಕಂದರಾಬಾದ್​​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಅವರನ್ನು ಪಾಟ್ನಾದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Telegram Group
error: Content is protected !!