ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಖಾಲಿ ಇರುವ ಸಾವಿರಾರು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ 2022 ಹುದ್ದೆಗಳ ನೇಮಕಾತಿಗಾಗಿ ಯಾವುದೇ ಪದವಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ
ಅಸಿಸ್ಟಂಟ್ ಆಡಿಟ್ ಆಫೀಸರ್, ಇನ್ಸ್‌ಪೆಕ್ಟರ್, ಇನ್‌ಕಮ್‌ಟ್ಯಾಕ್ಸ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಆಡಿಟರ್, ಜೆಎಸ್‌ಒ ಮತ್ತು ಸ್ಪೆಷಲಿಸ್ಟ್ ಆಫೀಸರ್ ಸೇರಿದಂತೆ 36 ವಿಧದ ಹುದ್ದೆಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿ ನೇಮಕ ಮಾಡಲು ಎಸ್‌ಎಸ್‌ಸಿ ನೇಮಕ ಪ್ರಕ್ರಿಯೆ ನಡೆಸುತ್ತದೆ.
ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ ಹುದ್ದೆಗಳ ಆಧಾರದಲ್ಲಿ 27 ರಿಂದ 30 ವರ್ಷದ ವರೆಗೆ ಇರುತ್ತದೆ. ಅಲ್ಲದೇ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವೇತನ ಶ್ರೇಣಿ
ಯಾವುದೇ ಹುದ್ದೆಗೆ ಕನಿಷ್ಠ 30,000 ದಿಂದ 81,000 ರೂ ವರೆಗೆ ಮಾಸಿಕ ವೇತನ ಸಿಗಲಿದೆ.
ಆಯ್ಕೆ ವಿಧಾನ:
ಎಸ್‌ಎಸ್‌ಸಿ ಸಿಜಿಎಲ್ ಹುದ್ದೆಗಳ ಭರ್ತಿಗೆ 3 ಹಂತದ ಪರೀಕ್ಷೆ ಇರುತ್ತದೆ. ಟೈಯರ್ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದಿನ ಪರೀಕ್ಷೆ ಹಂತ ಟೈಯರ್ 2, ಟೈಯರ್ 3 (ವಿವರಣಾತ್ಮಕ) ಪರೀಕ್ಷೆ ಬರೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ;
ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯ ಅಧಿಸೂಚನೆಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ದಿನಾಂಕ: 23-12-2021
ಪರೀಕ್ಷೆಗೆ ರಿಜಿಸ್ಟ್ರೇಷನ್ ಆರಂಭ ದಿನಾಂಕ: 23-12-2021
ಪರೀಕ್ಷೆಗೆ ರಿಜಿಸ್ಟ್ರೇಷನ್‌ಗೆ ಕೊನೆ ದಿನಾಂಕ: 23-01-2022 ರ ರಾತ್ರಿ 11-30 ರವರೆಗೆ.
ಪರೀಕ್ಷೆ ಶುಲ್ಕ ಪಾವತಿಸಲು ಕೊನೆ ದಿನಾಂಕ:25-01-2022 ರ ರಾತ್ರಿ 11-30 ರವರೆಗೆ.
ಪರೀಕ್ಷೆ ಶುಲ್ಕ ಚಲನ್ ಮೂಲಕ ಪಾವತಿಸಲು ಕೊನೆ ದಿನಾಂಕ 27-01-2022
ಪರೀಕ್ಷೆ ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ 2022 ರ ಜನವರಿ 28 ರಿಂದ ಫೆಬ್ರುವರಿ 01 ರವರೆಗೆ.
ಪರೀಕ್ಷೆ ದಿನಾಂಕ ಏಪ್ರಿಲ್ 2022
Website |
Notification PDF |
Apply Online |