March 23, 2023

ವಿಮ್ಸ್ ನಲ್ಲಿ ಗ್ರೂಪ್ ಸಿ ಹುದ್ದೆಗಳ ನೇಮಕಾತಿ 2022 | Karnataka govt jobs 2022 | government jobs in Karnataka 2022 | UDYOGA BINDU

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (VIMS) ಖಾಲಿ ಇರುವ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧ ಪಟ್ಟ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಸಂದರ್ಶನ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Telegram Group

ಗ್ರೂಪ್ ಸಿ ಹುದ್ದೆಗಳ ಸಂಪೂರ್ಣ ವಿವರಗಳು 

• ಶುಶ್ರೂಷಾಧಿಕಾರಿ : 110 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಜಿ.ಎನ್.ಎಂ ಶುಶ್ರೂಷ ತರಬೇತಿ (Not less than 3 years) ಹೊಂದಿರತಕ್ಕದ್ದು. ಬಿ.ಎಸ್.ಸಿ ನರ್ಸಿಂಗ್ ಹೊಂದಿದ್ದಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.

• ರೇಡಿಯೋಗ್ರಾಫರ್ : 1 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮಾ ಹೊಂದಿರತಕ್ಕದ್ದು.

• ಫಾರ್ಮಸಿ ಅಧಿಕಾರಿ : 2 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ‘ಡಿ’ ಫಾರ್ಮಾ ಪದವಿ ಹೊಂದಿರಬೇಕು. ‘ಬಿ’ ಫಾರ್ಮಾ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

• ಕ್ಷ-ಕಿರಣ ತಂತ್ರಜ್ಞರು : 3 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮಾ ಹೊಂದಿರತಕ್ಕದ್ದು.

• ಫಿಜಿಯೋಥೆರಪಿಸ್ಟ್ : 1 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಪಿಯುಸಿ & ಡಿಪ್ಲೋಮಾ ಇನ್ ಫಿಜಿಯೋಥೆರಪಿಸ್ಟ್ ಕೋರ್ಸ್ ಹೊಂದಿರತಕ್ಕದ್ದು.

• ಡಯೆಟಿಷಿಯನ್ : 1 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಹೋಂ ಸೈನ್ಸ್ ನಲ್ಲಿ ಪದವಿ ಹಾಗೂ ಬಿ.ಎಸ್ಸಿ ನ್ಯೂಟ್ರಿಷಿಯನ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

• ಲ್ಯಾಬ್ ಟೆಕ್ನಿಷಿಯನ್ : 3 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಲ್ಯಾಬ್ ಟೆಕ್ನಿಷಿಯನ್ ತಾಂತ್ರಿಕ ಡಿಪ್ಲೊಮಾ ಹೊಂದಿರಬೇಕು.

• ಡ್ರೈವರ್ : 6 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಎಸ್.ಎಸ್.ಎಲ್.ಸಿ ಮತ್ತು ಹೆವಿ ಮೋಟರ್ ವೆಹಿಕಲ್ ಚಾಲನೆ ಪರವಾನಿಗೆ ಮತ್ತು 3 ವರ್ಷದ ಅನುಭವ ಹೊಂದಿರಬೇಕು.

• ಡಯಾಲಿಸಿಸ್ ಟೆಕ್ನಿಷಿಯನ್ : 1 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್ ಹೊಂದಿರತಕ್ಕದ್ದು.

• ಸಿಟಿ ಟೆಕ್ನಿಷಿಯನ್ : 2 ಹುದ್ದೆ
ಗ್ರೂಪ್ ‘ಸಿ’ ಹುದ್ದೆಗಳ ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಡಿಪ್ಲೋಮಾ ಇನ್ ಸಿಟಿ ಟೆಕ್ನಿಷಿಯನ್ ಕೋರ್ಸ್ ಹೊಂದಿರಬೇಕು.

ಉದ್ಯೋಗ ಸ್ಥಳ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಗ್ರೂಪ್ ‘ಸಿ’ ಹುದ್ದೆಗಳ ಸಂಖ್ಯೆ : ಒಟ್ಟು 130 ಹುದ್ದೆಗಳ ಭರ್ತಿಗೆ ಸಂದರ್ಶನಕ್ಕೆ ಕರೆಯಲಾಗಿದೆ.

ಗ್ರೂಪ್ ‘ಸಿ’ ಹುದ್ದೆಗಳ ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.

ಗ್ರೂಪ್ ‘ಸಿ’ ಹುದ್ದೆಗಳ ವೇತನ : ಕಾರ್ಮಿಕ ಕಾಯ್ದೆಯನ್ವಯ ಮಾಸಿಕ ವೇತನ ನೀಡಲಾಗುತ್ತದೆ.
ಗ್ರೂಪ್ ‘ಸಿ’ ಹುದ್ದೆಗಳ ಆಯ್ಕೆ ವಿಧಾನ : ಹೊರಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ :
ಸಂಸ್ಥೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ದಾಖಲಾತಿಗಳ ಒಂದು ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಸಂದರ್ಶನ ಸ್ಥಳ : ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಬಳ್ಳಾರಿ

ಗ್ರೂಪ್ ‘ಸಿ’ ಹುದ್ದೆಗಳ ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿಯೊಂದಿಗೆ ರೂ. 500 ಶುಲ್ಕವನ್ನು ನಿರ್ದೇಶಕರು, ವಿಮ್ಸ್, ಬಳ್ಳಾರಿ ಇವರ ಹೆಸರಿನಲ್ಲಿ ಡಿ.ಡಿ. ಮೂಲಕ ಪಡೆದು ಸಲ್ಲಿಸಬೇಕು.

ಸಂದರ್ಶನ ನಡೆಯುವ ದಿನಾಂಕ
ನೇರ ಸಂದರ್ಶನ ದಿನಾಂಕ : ಜನವರಿ 10, 2022 ರಂದು ಬೆಳಿಗ್ಗೆ 10.30 ಗಂಟೆಗೆ

Website
Notification Pdf

Telegram Group
error: Content is protected !!