May 28, 2023

ಸಕ್ಕರೆ ಕಾಯಿಲೆಗೆ ಇಲ್ಲಿದೆ ರಾಮಬಾಣ | ಈಗಲೇ ಇದನ್ನು ಸೇವಿಸಿ ಲಾಭ ಪಡೆಯಿರಿ | Health Tips In Kannada

ಈಗ ಸಕ್ಕರೆ ಕಾಯಿಲೆಗೆ ಇಲ್ಲಿದೆ ರಾಮಬಾಣ

ಸಕ್ಕರೆ ಕಾಯಿಲೆ ಇದ್ದವರು ತಮ್ಮ ಲೈಫ್ ಸ್ಟೈಲ್ ಮತ್ತು ತಿಂಡಿ ಮತ್ತು ಆಹಾರ ಪದ್ಧತಿಯ ಕುರಿತು ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ. ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳಿವೆ. ತಜ್ಞರ ಪ್ರಕಾರ, ತುಳಸಿ ಆಲಿವ್ ಮತ್ತು ಮಧುನಾಶಿನಿ ಮುಂತಾದ ಸಸ್ಯಗಳ ಹಸಿರು ಎಲೆಗಳು ಮಧುಮೇಹದ ಸಮಸ್ಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

Telegram Group

ಆಲಿವ್ ಎಲೆಗಳು :
ಟೈಪ್ 2 ಸಕ್ಕರೆ ಕಾಯಿಲೆ ರೋಗಿಗಳು ಮುಂಜಾನೆ ಎದ್ದ ಕೂಡಲೇ ಆಲಿವ್ ಎಲೆಗಳನ್ನು ಸೇವಿಸಿದರೆ, ಅದು ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ. 2010 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆಲಿವ್ ಎಲೆಗಳ ಸೇವನೆ ಮಾಡುವುದರಿಂದ ಇನ್ಸುಲಿನ್ ಪ್ರತಿರೋಧದಲ್ಲಿ ಸಾಕಷ್ಟು ಸುಧಾರಣೆಯನ್ನು ತರುತ್ತದೆ ಎನ್ನುವುದು ದೃಢಪಟ್ಟಿದೆ. ಈ ಅಧ್ಯಯನದಲ್ಲಿ, 46 ಜನರಿಗೆ ಸೇವಿಸಲು ಆಲಿವ್ ಎಲೆಗಳನ್ನು ನೀಡಲಾಗಿತ್ತು. 21 ವಾರಗಳ ನಂತರ ರಕ್ತದ ಸಕ್ಕರೆ ಪ್ರಮಾಣ ಮತ್ತೆ ಪರೀಕ್ಷಿಸಿದಾಗ, ಇದು ಸಕ್ಕರೆ ಕಾಯಿಲೆ ರೋಗಿಗಳಿಗೆ ರಾಮ ಬಾಣ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಸಿಹಿ ತುಳಸಿ :
ಸ್ಟೀವಿಯಾ ಅಂದರೆ ಕನ್ನಡದಲ್ಲಿ ಸಿಹಿ ತುಳಸಿ ಎಂದು ಅರ್ಥ ಸಕ್ಕರೆ ಕಾಯಿಲೆ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. 2012 ರ ಅಧ್ಯಯನದ ಪ್ರಕಾರ, ಸಿಹಿ ತುಳಸಿ ತಿನ್ನುವುದರಿಂದ ರೋಗಿಗಳ ರಕ್ತದಲ್ಲಿನ ಶುಗರ್ ಲೆವೆಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವುದು ತಿಳಿದು ಬಂದಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳುವ ಪ್ರಕಾರ, ಸಿಹಿ ತುಳಸಿ ಎಲೆಗಳ ತಿನ್ನುವುದರಿಂದ ಸಕ್ಕರೆ ಕಾಯಿಲೆ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.

ಟರ್ನಿಪ್ ಎಲೆಗಳು :
ಟರ್ನಿಪ್ ಅಥವಾ ಗಡ್ಡೆ ಕೋಸಿನ ಸೊಪ್ಪಿನಲ್ಲಿ ನಾರಿನ ಅಂಶವು ಅತಿ ಹೆಚ್ಚಾಗಿರುವುದರಿಂದ,
ಸಾಕಷ್ಟು ಅಧ್ಯಯನದ ಪ್ರಕಾರ, ಟೈಪ್ 1 ಸಕ್ಕರೆ ಕಾಯಿಲೆ ಹೊಂದಿರುವ ಜನರು ಫೈಬರ್ ಅನ್ನು ಸೇವಿಸಿದರೆ, ಅದು ರಕ್ತದಲ್ಲಿನ ಶುಗರ್ ಲೆವೆಲ್ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಟರ್ನಿಪ್ ಎಲೆಗಳನ್ನು ಬೆಳಗಿನ ಸಮಯ ಜಗಿಯುವುದರಿಂದ ಟೈಪ್ 2 ಸಕ್ಕರೆ ಕಾಯಿಲೆ ರೋಗಿಗಳಲ್ಲಿ ರಕ್ತದಲ್ಲಿನ ಶುಗರ್ ಲೆವೆಲ್, ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಣೆಯಲ್ಲಿ ತರಬಹುದು.

ಮಧುನಾಶಿನಿ ಎಲೆ :
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಧುನಾಶಿನಿ ಎಲೆ ರಕ್ತದಲ್ಲಿನ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ. 2014 ರ ಅಧ್ಯಯನದ ಪ್ರಕಾರ ತಿಳಿದುಬಂದಿರುವುದೇನೆಂದರೆ, ಟೈಪ್ 1 ಮತ್ತು ಟೈಪ್ 2 ಸಕ್ಕರೆ ಕಾಯಿಲೆ ರೋಗಿಗಳಿಗೆ 18 ತಿಂಗಳ ಕಾಲ ಮಧುನಾಶಿನಿ ಎಲೆಗಳನ್ನು ಕೊಟ್ಟಾಗ, ಇನ್ಸುಲಿನ್ ತೆಗೆದುಕೊಂಡವರಿಗಿಂತ ಅವರಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿದೆ.

Telegram Group
error: Content is protected !!