ಐಪಿಎಲ್ 2022: ಹೊಸ ಎರಡು ತಂಡಗಳು ಸೇರ್ಪಡೆ….
ಭಾರತದಲ್ಲಿ ಐಪಿಎಲ್ ರಜೆಯಲ್ಲಿ ಹಬ್ಬವೋ ಹಬ್ಬ ಭಾರತದ ಆಟಗಾರ ಜೊತೆಯಲ್ಲಿ ದೇಶ ವಿದೇಶದಿಂದ ಬಂದ ಆಟಗಾರ ಸೇರಿ ಆಟವಾವುವದು ಎಂದರೆ ತುಂಬಾ ಖುಷಿ ಅನಿಸುತ್ತದೆ. ಹೀಗಿರುವಾಗ ಮತ್ತೆ ಇನ್ನೆರೆಡು ತಂಡಗಳು ಲಕ್ನೋ ಮತ್ತು ಅಹಮದಾಬಾದ್ ಸೇರ್ಪಡೆಗೊಂಡಿವೆ.
ಆಟಗಾರರ ವಿವರ: ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಯಾವ ತಂಡಕ್ಕೆ ಯಾರು ಆಯ್ಕೆಯಾಗಿದ್ದಾರೆ ನೋಡೋಣ…
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳು 6 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಲಕ್ನೋ ಹಾಗೂ ಅಮಹದಾನಾದ್ ತಂಡಗಳು ಸ್ಪೆಷಲ್ ಪಿಕ್ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಇಲ್ಲಿ ಲಕ್ನೋ ಫ್ರಾಂಚೈಸಿಯು ತಂಡದ ನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ ಮಾಡಿದೆ, ಅಹದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಆಗಿ ಆರಿಸಿಕೊಂಡಿದೆ.
ಇದಲ್ಲದೆ ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು,ಯಾವ ತಂಡಕ್ಕೆ ಯಾರು ಆಯ್ಕೆಯಾಗಿದ್ದಾರೆ ಎಂಬ ವಿವರ ನೋಡೋಣ…
ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಿದ ಮೂವರು ಆಟಗಾರರು
- ಕೆಎಲ್ ರಾಹುಲ್ (ನಾಯಕ)
- ರವಿ ಬಿಷ್ಣೋಯ್ (ಸ್ಪಿನ್ನರ್)
- ಮಾರ್ಕಸ್ ಸ್ಟೋಯಿನಿಸ್ ( ಆಸ್ಟ್ರೇಲಿಯಾ ಆಲ್ರೌಂಡರ್)
ಅಹಮದಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿದ ಮೂವರು ಆಟಗಾರರು
- ಹಾರ್ದಿಕ್ ಪಾಂಡ್ಯ (ನಾಯಕ)
- ರಶೀದ್ ಖಾನ್ (ಅಫ್ಘಾನಿಸ್ತಾನ್ ಸ್ಪಿನ್ನರ್)
- ಶುಭ್ಮನ್ ಗಿಲ್ (ಆರಂಭಿಕ ಆಟಗಾರ).