ಅಜೇಲಿಯಾ ಎಂಬ ಹೆಣ್ಣು ಚಿಂಪಾಂಜಿ
ಉತ್ತರ ಕೊರಿಯಾದ (North Korea) ಪ್ಯೊಂಗ್ಯಾಂಗ್ ಮೃಗಾಲಯದಲ್ಲಿ ಹೆಣ್ಣು ಚಿಂಪಾಂಜಿಯೊಂದು ಸಿಗರೇಟ್ (Cigarette) ಸೇದುತ್ತೆ ಎಂದರೆ ನಂಬಲೇಬೇಕು. ಧೂಮಪಾನ ದೇಹಕ್ಕೆ ಹಾನಿಕಾರ ಎಂಬಗೊತ್ತಿರುವ ವಿಷಯ ಆದರೆ ಇಲ್ಲೊಂದು ಅಚ್ಚರಿಯ ವಿಚಾರವಿದೆ.ಅದೇನೆಂದರೆ ಈ ಚಿಂಪಾಂಜಿ ದಿನಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 40 ಸಿಗರೇಟ್ ಸೇದುತ್ತಿತ್ತು. ಹೆಣ್ಣು ಚಿಂಪಾಂಜಿ ಸಿಗರೇಟು ಹಚ್ಚುವುದನ್ನು ಕೂಡ ಕರಗತ ಮಾಡಿಕೊಂಡಿತ್ತು.
ವಾಸ್ತವದ ಸಂಗತಿಯೆಂದರೆ, ಮೃಗಾಲಯದಲ್ಲಿ ಜನರ ಸಿಗರೇಟ್ ಸೇದುತ್ತಿದ್ದರು. ಮಾತ್ರವಲ್ಲದೆ ಮನರಂಜನೆಗಾಗಿ ಜನರು ಚಿಂಪಾಂಜಿಗೂ ಸಿಗರೇಟ್ ನೀಡುತ್ತಿದ್ದರು. ಇದನ್ನು ನೋಡಿ ಕಲಿಯತೊಡಗಿತು. ಹಾಗಾಗಿ ಬರುಬರುತ್ತಾ ಸಿಗರೇಟ್ ಸೇದಲು ಹೆಣ್ಣು ಚಿಂಪಾಂಜಿ ಪ್ರಾರಂಭಿಸಿತು. ಚಿಂಪಾಂಜಿ ಅಜೇಲಿಯಾಗೆ ತರಬೇತಿ ನೀಡಲಾಗಿದೆ. ಇದರಿಂದ ಅದುವೇ ಸಿಗರೇಟು ಹಚ್ಚಲು ಕಲಿತಿದೆ. ಎದುರಿಗಿದ್ದವನೂ ಸಿಗರೇಟು ಎಸೆದರೆ ಹೆಣ್ಣು ಚಿಂಪಾಂಜಿ ಸಿಗರೇಟ್ ಹಚ್ಚುತ್ತಾ ಸೇದುತ್ತದೆ.
ಹೆಣ್ಣು ಚಿಂಪಾಂಜಿ ಕ್ರಮೇಣ ಸಿಗರೇಟ್ ಸೇದುವ ಚಟಕ್ಕೆ ಬಿದ್ದಿತು. ಇಲ್ಲಿಯವರೆಗೆ, ಈ ಅಜೇಲಿಯಾನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಚಿಂಪಾಂಜಿಗೆ 25 ವರ್ಷ ವಯಸ್ಸಾಗಿದೆ ಮತ್ತು ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ.ಈ ಚಿಂಪಾಂಜಿಯ ಇದನ್ನು ಕೊರಿಯನ್ ಭಾಷೆಯಲ್ಲಿ ‘ಡೇಲ್’ ಎಂದು ಕರೆಯಲಾಗುತ್ತದೆ. ಈ ಚಿಂಪಾಂಜಿಯನ್ನು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಮೃಗಾಲಯದಲ್ಲಿ ಇರಿಸಲಾಗಿದೆ.