September 22, 2023

ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

ಮೊಟ್ಟ ಮೊದಲ ಬಾರಿಗೆ ಸೋಲ್ಜರ್​ ಪಾತ್ರದಲ್ಲಿ ಸ್ಯಾಂಡಲ್‍ವುಡ್ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ ಜೇಮ್ಸ್​. ಇದೀಗ ಜೇಮ್ಸ್​ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸೋಲ್ಜರ್​ ಪಾತ್ರದಲ್ಲಿ ಅಪ್ಪು ಮಿಂಚಿದ್ದಾರೆ. ಈ ಟೀಸರ್​ ಕಂಡು ಫ್ಯಾನ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ.

Telegram Group

 

 

 

ಜೇಮ್ಸ್’ ಟೀಸರ್ ಪಿಆರ್‌ಕೆ ಆಡಿಯೋ ಸಂಸ್ಥೆಯಡಿ ಅನಾವರಣಗೊಳಿಸಿರುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿರುವ ಚಿತ್ರ ತಂಡ ಜೇಮ್ಸ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ. ಇನ್ನೂ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪುನೀತ್ ಅವರನ್ನು ಬಿಗ್‍ಸ್ಕ್ರೀನ್ ಮೇಲೆ ಬರಮಾಡಿಕೊಳ್ಳಲು ಕರ್ನಾಟಕದ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಟೀಸರ್​ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು, ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ.ವಿಭಿನ್ನ ಲುಕ್​ಗಳಲ್ಲಿ ಪುನೀತ್ ಮಾಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರವನ್ನು ನೋಡುಲು ಕುತೂಹಲ ಹೆಚ್ಚಿಸಿದೆ.

‘ಜೇಮ್ಸ್’ ಚಿತ್ರದ ಪವರ್ ಫುಲ್ ಟೀಸರ್ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತ್ರವಲ್ಲ ಕರ್ನಾಟದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿರುವ 580 ಚಿತ್ರಮಂದಿರಗಳು ಹಾಗೂ 1200 ಮಲ್ಟಿಪ್ಲೆಕ್ಸ್ ಗಳಲ್ಲಿ ಜೇಮ್ಸ್ ಟೀಸರ್ ಪ್ರದರ್ಶನ ಆಗುತ್ತಿದೆ. ಬೆಳಿಗ್ಗೆ ಶೋ ಇಂಟರ್‌ವಲ್ ಟೈಮ್‌ನಲ್ಲಿ ಜೇಮ್ಸ್ ಟೀಸರ್ ರಾರಾಜಿಸುತ್ತಿದೆ. ಮಾರ್ಚ್ 17ರವರೆಗೆ ಜೇಮ್ಸ್ ಚಿತ್ರ ರಿಲೀಸ್ ಆಗುವರೆಗೂ ಚಿತ್ರದ ಟೀಸರ್ ಪ್ರಸಾರ ಅಗಲಿದೆ.

ಟೀಸರ್ ಬಿಡುಗಡೆಯಾದ್ ನಂತರ ಫ್ಯಾನ್ಸ್ ಸೆಲೆಬ್ರೇಷನ್​!
ಟೀಸರ್​ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದು. ಅಪ್ಪು.. ಅಪ್ಪು.. ಅಂತ ಜೈಕಾರ ಹಾಕಿದ್ದಾರೆ.

 

 

ಫಿಲಂ ಯಾವಾಗ ಬಿಡುಗಡೆ
ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ.ಚಿತ್ರದಲ್ಲಿ ಶಿವರಾಜ್​ಕುಮಾರ್ ಧ್ವನಿ ನೀಡಿದ್ದು ಅದಲ್ಲದೇ ಚಿತ್ರದಲ್ಲಿ ರಾಘಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Telegram Group
error: Content is protected !!