ಚಿನ್ನದ ಬೆಲೆಯಲ್ಲಿ ಇಳಿಕೆ
ಮಹಿಳೆಯರಿಗೆ ಚಿನ್ನ ಎಂದರೆ ಬಹಳ ಇಷ್ಟ. ಹಬ್ಬ, ಮದುವೆ ಸಮಾರಂಭಗಳಲ್ಲಿ ಬಂತು ಎಂದರೆ ಸಾಕು ಅದೇನೋ ತುಂಬಾ ಸಂತಸ. ಇನ್ನು ಚಿನ್ನ ಖರೀದಿಸುವರಿಗೆ ಚಿನ್ನದ ದರದಲ್ಲಿ ಸ್ವಲ್ಪ ಬೆಲೆ ಕಡಿಯಾಗಿದೆ.
ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ನಂತರ ಕಳೆದು ಒಂದು ವಾರದ ನಂತರ ದೇಶದಲ್ಲಿ ಬಂಗಾರ ಹಾಗೂ ಬೆಳ್ಳಿ ದರಗಳು ಏರಿಕೆಯ ಹಾದಿಯಲ್ಲಿತ್ತು. ಈ ಹಿನ್ನೆಲೆ ಕೇಂದ್ರ ಬಜೆಟ್ ನಂತರ ಚಿನ್ನದ ದರ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ಬೆಲೆ ಏರಿಕೆಯ ಬಿಸಿ ಮುಟ್ಟಿತ್ತು.
ಚಿನ್ನದ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಚಿನ್ನದ ದರ ಏರಿಕೆಯ ಹಾದಿಯಲ್ಲಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಸಹ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,810 ರೂ ಇತ್ತು.
ಇಂದು 510 ರೂ ಕಡಿಮೆಯಾಗಿ 46,300 ರೂ ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,060 ರೂ ಇತ್ತು. ಇಂದು 550 ರೂ ಇಳಿಕೆಯಾಗಿ 50,510 ರೂ ಆಗಿದೆ.