ಭಾನುವಾರದ ಮಟನ್ ಬಿರಿಯಾನಿ ಮಾಡುವ ವಿಧಾನ
ಮಟನ್ ಬಿರಿಯಾನಿ ಪ್ರಿಯರಿಗೆ ಮಟನ್ ಬಿರಿಯಾನಿ ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುವುದು ಖಚಿತ. ಮಟನ್ ಬಿರಿಯಾನಿಗಾಗಿ ಜನರು ಹೋಟಲಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವರ ಸಂಖ್ಯೆಯು ಹೆಚ್ಚುತ್ತಿವೆ . ಹಾಗೆಯೇ ಮನೆಗೆ ಯಾರಾದ್ರೂ ಅತಿಥಿಗಳು ಬಂದರೆ ಮಟನ್ ಬಿರಿಯಾನಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಮಟನ್ ಬಿರಿಯಾನಿಯಾನಿಗೆ ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಕೆಜಿ, ಮಟನ್ – 1 ಕೆಜಿ, ಈರುಳ್ಳಿ – 6 ಪುದೀನ ಸೊಪ್ಪು – ಅಗತ್ಯಕ್ಕೆ ಅನುಗುಣವಾಗಿ, ಉಪ್ಪು – ರುಚಿಗೆ, ತುಪ್ಪ – 3 ಟೀ ಚಮಚ, ಎಣ್ಣೆ – 2 ಟೀ ಚಮಚ, ಹಸಿರು ಮೆಣಸಿನಕಾಯಿ – 4, ನಿಂಬೆ ಹಣ್ಣು – ಅರ್ಧ, ಕರಿಬೇವು – ಅಗತ್ಯಕ್ಕೆ ಅನುಗುಣವಾಗಿ, ಮೆಣಸಿನ ಪುಡಿ – 2 ಟೀ ಚಮಚ, ಗರಂ ಮಸಾಲ – 1 ಟೀ ಚಮಚ, ಮಟನ್ ಮಸಾಲ – 1 ಟೀ ಚಮಚ, ಬಿರಿಯಾನಿ ಎಲೆ – 2, ಅನಾನಸ್ ಹೂ – 2, ಏಲಕ್ಕಿ – 4, ಕಪ್ಪು ಏಲಕ್ಕಿ – 2, ಚಕ್ಕೆ ಲವಂಗ – 4 ರಿಂದ 5, ಸೋಂಪು – ಸ್ವಲ್ಪ, ಕಸೂರಿ ಮೇಥಿ – ಸ್ವಲ್ಪ, ಅರಿಶಿನ ಪುಡಿ – ಸ್ವಲ್ಪ (ಅರ್ಧ ಟೀ ಚಮಚ), ಧನಿಯಾ ಪುಡಿ – 1 ಟೇಬಲ್ ಚಮಚ, ಒಣ ಮೆಣಸಿನ ಪುಡಿ – 2 ಟೇಬಲ್ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀ ಚಮಚ, ಮೊಸರು – 2 ಟೇಬಲ್ ಚಮಚ.
ಮಟನ್ ಬಿರಿಯಾನಿ ಮಾಡುವ ವಿಧಾನ
ಮಾಂಸಕ್ಕೆ, ಅರಿಸಿಣ ಪುಡಿ, ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಉಳಾಗಡ್ಡಿ (ಈರುಳ್ಳಿ), ಹಸಿ ಮೆಣಸಿನಕಾಯಿ, ಟೊಮೆಟೋ, ಕೊತ್ತಂಬರಿ, ಪುದಿನ ಕತ್ತರಿಸಿಟ್ಟು ಕೊಂಡು ದೊಡ್ಡದಾದ ತೆರೆದ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ, ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಹಸಿ ಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಂಡ ನಂತರ ಬೇಯಿಸಿದ ಮಟನ್ ಮಾಂಸ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಕೆಂಪು ಖಾರದ ಪುಡಿ, ಕೊತ್ತಂಬರಿ ಪುಡಿ,
ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, ಹಸಿ ಮೆಣಸಿನಕಾಯಿ, ಟೊಮೆಟೋ, ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಅಕ್ಕಿ ಅಳತೆಗೆ ಸರಿಯಾಗಿ ನೀರು ಹಾಕಿ ಬೇಯಿಸಿದರೆ ರುಚಿಯಾದ ಮಟನ್ ಬಿರಿಯಾನಿ ಸವಿಯಲು ಸಿದ್ಧವಾಗಿರುತ್ತೆ.