May 28, 2023

BBMP ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 2022

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನೇಮಕಾತಿ ಪ್ರಕಟಣೆ 2022

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನೇಮಕಾತಿ ಪ್ರಕಟಣೆ ಹೊರಡಿಸಿದೆ , ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

Telegram Group

ಇಲಾಖೆ ಹೆಸರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಗಳ ಹೆಸರು: ಕಾನೂನು ಕೋಶದ ಮುಖ್ಯಸ್ಥ

 

ಅರ್ಹತೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪಾಲಿಕೆಯು ಕಾನೂನು ಕೋಶದ ಮುಖ್ಯಸ್ಥರ (ಹೆಡ್‌ ಆಫ್‌ ದಿ ಲೀಗಲ್ ಸೆಲ್‌) ಹುದ್ದೆಗಾಗಿ, ಸೇವಾ ವಿಷಯಗಳಲ್ಲಿ, ಕಾರ್ಮಿಕರ ಕಾನೂನು, ಭೂ ಕಾನೂನು ಇತ್ಯಾದಿ ವಿಷಯಗಳಲ್ಲಿ ಉತ್ತಮ ಪರಿಣಿತಿ ಹೊಂದಿರುವ ಮತ್ತು ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿರುವ ಅಥವಾ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರುಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ ಅವಧಿ, ವೇತನ, ನೇಮಕ ಪ್ರಕ್ರಿಯೆ
– ಹುದ್ದೆಯ ಅವಧಿ ಆರಂಭದಲ್ಲಿ 01 ವರ್ಷದವರೆಗಿರುತ್ತದೆ. ಕಾರ್ಯಕ್ಷಮತೆಯನ್ನು ಆಧರಿಸಿ 01 ರಿಂದ 03 ವರ್ಷಗಳವರೆಗೆ ವೃತ್ತಿಯಲ್ಲಿ ಮುಂದುವರೆಸಲಾಗುವುದು.
– ಕೆಸಿಎಸ್‌ಆರ್‌ ನಿಯಮಗಳ ಪ್ರಕಾರ ವೇತನ ನಿಗಧಿಪಡಿಸಲಾಗುವುದು. ಬಿಬಿಎಂಪಿ ಉದ್ಯೋಗಿಗಳಿರುವಂತೆ ರಜೆ ಮತ್ತು ವೈದ್ಯಕೀಯ ಸೌಲಭ್ಯಗಳಿರುವುದು.
– ಸಂದರ್ಶನದ ಮೂಲಕ ನೇಮಕ ಮಾಡಲಾಗುವುದು.
– ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವವರು 65 ವರ್ಷ ವಯೋಮಿತಿ ಮೀರಿರಬಾರದು.

 

 

ಅರ್ಜಿ ಸಲ್ಲಿಸುವ ವಿಧಾನ:
ಸಂಪೂರ್ಣ ವ್ಯಕ್ತಿ ಚಿತ್ರಣ ಇರುವ (ಬಯೋಡಾಟಾ) ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿರುವ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿಯ ಲಕೋಟೆ ಮೇಲೆ ‘ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗಾಗಿ ಅರ್ಜಿ’ ಎಂದು ಬರೆದಿರಬೇಕು.

ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಮೇಲೆ ನಿಗದಿಪಡಿಸಿದ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :
ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್‌.ಆರ್‌, ಚೌಕ, ಬೆಂಗಳೂರು-560002.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  28-02-2022
Telegram Group
error: Content is protected !!