ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..?
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ಪ್ರಶ್ನೆ ಇದ್ದೇ ಇರುತ್ತದೆ, ಮಹಿಳೆಯರಿಗೆ ಕಾಡುವ ಒಂದು ರೀತಿಯ ಮಚ್ಚೆ ಬಂಗು, ಬಂಗು ಎಂದರೆ ಏನು
ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯುತ್ತಾರೆ.
ನಿಮ್ಮ ಸೌಂದರ್ಯದ ಮಕರ ಕ್ಷಣದಲ್ಲಿನ ಸೌಂದರ್ಯವನ್ನು ಹಾಳು ಮಾಡುವ ಒಂದು ರೀತಿಯ ಮಚ್ಚೆ.
ನಿಮ್ಮ ಮುಖದ ಮೇಲೆ ಹಣೆಯ ಮೇಲೆ ಹಣೆಯ ಒಂದು ಭಾಗದಲ್ಲಿ ಇದು ಗಲೀಜು ರೀತಿಯಲ್ಲಿ ಇರುತ್ತದೆ ಇದು ನಿಮ್ಮ ಚರ್ಮದ ಪೂರ್ತಿ ಕಪ್ಪು ಮಾರ್ಕ್ ರೀತಿಯಲ್ಲಿ ಚುಕ್ಕೆಗಳು ರೀತಿಯಲ್ಲಿ ನಿಮ್ಮ ಸೌಂದರ್ಯವನ್ನು ಹಾಳು ಮಾಡಿ ನಿಮ್ಮ ಮುಖ ಲಕ್ಷಣವನ್ನು ಹಾಳು ಮಾಡುವುದೇ ಈ ಬಂಗಿನ್ ಕೆಲಸ. ಮಹಿಳೆಯರಿಗೆ ಸುಂದರ ಮುಖದಲ್ಲಿ ಹೆಚ್ಚಾಗಿ ಕಾಡುವ ಈ ಬಂಗು ನಮ್ಮ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಬರುವದು. ಈ ಹೈಪರ್ ಪಿಗ್ಮೆಂಟೇಶನ್ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಸುಡುವ ಸೂರ್ಯನ ಬಿಸಿಲಿಗೆ ಸತತವಾಗಿ ಚರ್ಮವನ್ನು ಒಡ್ಡುವುದು. ಅನುವಂಶೀಯತೆ, ಹಾರ್ಮೋನಲ್ ಬದಲಾವಣೆಗಳು ಮುಖದ ಮೇಲೆ ಬಂಗು ಬರಲು ಕಾರಣವಾಗುತ್ತವೆ.
ಮನೆಯಲ್ಲಿ ಬಂಗು (ಪಿಗ್ಮೆಂಟೇಶನ್) ಚಿಕಿತ್ಸೆಗಾಗಿ ಮನೆ ಮದ್ದುಗಳು ಇಲ್ಲಿವೆ.
ಅಲೋವೇರಾ: ಬಂಗಿನ ಸಮಸ್ಯೆ ಇರುವವರು ಈ ಅಲೋವೇರಾವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಯ ಸಮಸ್ಯೆ ಮಾಯವಾಗುತ್ತದೆ. ಅಲೋವೇರಾ ಹೈಪರ್ ಪಿಗ್ಮೆಂಟೇಶನ್ಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಕೆಂಪು ಈರುಳ್ಳಿ:ವಿಟಮಿನ್ ಸಿ ಹೆಚ್ಚಾಗಿರುವ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಒಂದಾದ ಕೆಂಪು ಈರುಳ್ಳಿ ಮುಖದ ಮೇಲಿನ ಬಂಗು ನಿವಾರಣೆಗೆ ಉತ್ತಮ.
ಪರಂಗಿ ಹಣ್ಣು: ಪ್ಯಾಪೇನ್ ಅಂಶವು ಯಥೇಚ್ಚವಾಗಿರುವುದರಿಂದ ಇದು ಪಿಗ್ಮೆಂಟೇಶನ್ ನಿವಾರಣೆಗೆ ಉತ್ತಮ.