ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾದ ‘ಟ್ರೇಡ್ ಮಾರ್ಕ್’ ಸಾಂಗ್ ಯುಟ್ಯೂಬ್‌ನಲ್ಲಿ ದಾಖಲೆಗಳ ಸುರಿಮಳೆ
ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ನ ಲಿರಿಕಲ್ ವಿಡಿಯೊ ಹಾಡು ‘ಟ್ರೇಡ್ ಮಾರ್ಕ್’ ಸಾಂಗ್ ಯುಟ್ಯೂಬ್‌ನಲ್ಲಿ ದಾಖಲೆಗಳ ಸುರಿಮಳೆ ಮಾಡಿದೆ. ಚೇತನ್ ಕುಮಾರ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಪುನೀತ್ ರಾಜ್‌ಕುಮಾರ್ ಜನ್ಮದಿನದಂದು ತೆರೆಕಾಣಲಿದೆ. ಇದೀಗ ಅಭಿಮಾನಿಗಳು ಚಿತ್ರವನ್ನು ನೋಡಲು ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಜೇಮ್ಸ್ ಚಿತ್ರದ ‘ಟ್ರೇಡ್ ಮಾರ್ಕ್’ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಚಿತ್ರವು ಮಾಫಿಯಾ ಕಥೆಯನ್ನು ಹೊಂದಿದೆ. ಜೆ–ವಿಂಗ್ ಎಂಬ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾತ್ರದಲ್ಲಿ ಪವರ್‌ಸ್ಟಾರ್ ಪುನೀತ್ ಅವರು ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಪರಭಾಷೆಯಲ್ಲೂ ಜೇಮ್ಸ್ ಚಿತ್ರದ ಹವಾ..!
ಕನ್ನಡ ಭಾಷೆಯ ಹಾಡಿನ ಜೊತೆಗೆ ಇತರ ಭಾಷೆಗಳಲ್ಲೂ ‘ಟ್ರೇಡ್ ಮಾರ್ಕ್’ ಸಾಂಗ್ ಸದ್ದು ಮಾಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರಿಗೆ ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ರಾಜ್ಯಗಳಲ್ಲಿ ಹಾಗೂ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಹೀಗಾಗಿ ಫ್ಯಾನ್ಸ್ ಅಪ್ಪು ಹಾಡನ್ನು ಎಂಜಾಯ್ ಮಾಡಿದ್ದಾರೆ. ಜೇಮ್ಸ್ ಸಿನಿಮಾವನ್ನ ಹಬ್ಬದ ರೀತಿ ಆಚರಿಸಲು ಅಪ್ಪು ಅಭಿಮಾನಿ ಬಳಗ ಸಿದ್ಧತೆ ಮಾಡಿಕೊಳ್ಳುತ್ತಿದೆ.
‘ಜೇಮ್ಸ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆ ‘ಜೇಮ್ಸ್’ ಮೂಲಕ ಈಡೇರಲಿದೆ. ಒಟ್ಟಾರೆಯಾಗಿ ಅಭಿಮಾನಿಗಳು ಚಿತ್ರವನ್ನು ನೋಡಲು ಕುತೂಹಲ ಮತ್ತಷ್ಟು ಹೆಚ್ಚಾಗಿದೆ.