ಕ್ಯಾರೆಟ್ ಸೇವಿಸಿ ಆರೋಗ್ಯ ಸುಧಾರಿಸಿ
ಕ್ಯಾರೆಟ್ ಒಂದು ಶಾಖಾಹಾರಿ ಆಹಾರವಾಗಿದೆ. ಇದು ಚಳಿಗಾಲದಲ್ಲಿ ದೊರೆಯುವ ಒಂದು ಆಹಾರವಾಗಿದೆ. ಕ್ಯಾರೆಟ್ ಎಂದಿಗೂ ಬೇಡಿಕೆಯಲ್ಲೇ ಇರುವ ತರಕಾರಿ. ಪಲಾವ್, ಬಿಸಿಬೇಳೆ ಬಾತ್… ಹೀಗೆ ಹಲವಾರು ರುಚಿ ರುಚಿಯ ಖಾದ್ಯಗಳಿಗೂ ಕ್ಯಾರೆಟ್ ಬೇಕೇ ಬೇಕು. ಕೇವಲ ರುಚಿಗಷ್ಟೇ ಅಲ್ಲ, ಕ್ಯಾರೆಟ್ ದೇಹದ ಆರೋಗ್ಯದಲ್ಲೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ .
ಕ್ಯಾರೆಟ್ ಬಣ್ಣದಲ್ಲಿ ಆಕರ್ಷಕ, ತಿನ್ನಲು ರುಚಿಕರ, ಪೋಷಕಾಂಶಗಳ ಆಗರ. ಅದನ್ನು ಇಷ್ಟಪಡಲು ಇನ್ನೇನು ಕಾರಣಬೇಕು ಅಲ್ಲವೇ? ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕ್ಯಾರೆಟ್ ಸದಾ ಸಹಕಾರಿ.
ಪ್ರತಿದಿನವೂ ಕ್ಯಾರೆಟ್ ಅನ್ನು ತಿನ್ನುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆದು ಕೊಳ್ಳಬಹುದು.ಮಕ್ಕಳ ಆರೋಗ್ಯಕ್ಕೆ ಕ್ಯಾರೆಟ್ ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಕ್ಯಾರೆಟ್ ಬಣ್ಣದಲ್ಲಿ ಕೆಂಪಾಗಿದ್ದು ನೋಡಲು ಉದ್ದಗೆ ಇದ್ದು ರುಚಿಯಲ್ಲಿ ಸಿಹಿಯಾಗಿದ್ದು ಪೋಷಕಾಂಶಗಳ ಆಗರವಾಗಿದೆ. ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
ಕ್ಯಾರೆಟ್ನಲ್ಲಿರುವ ಆರೋಗ್ಯವರ್ಧಕ ಗುಣಗಳು
• ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್,
ಪ್ರಾಸ್ಪರಸ್‍ನಂತಹ ಮಿನರಲ್ಸ್‍ಗಳು ಇವೆ.
• ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು
ಅದು ಅತ್ಯಾವಶ್ಯಕ.
• ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗೂ
ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.
• ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ
ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ
• ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ
ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
• ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
• ನಿರ್ದಿಷ್ಟ ವಿಧದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‍ಕ್ಯಾರಿನೋಲ್ ಎಂಬ
ಆ್ಯಂಟಿಆಕ್ಸಿಡೆಂಟ್ ಇದೆ.