December 8, 2022

ಉಡುಪಿ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ 2022

Udupi District Court Recruitment 2022 : ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅಗತ್ಯವಿರುವ ಜವಾನ (ಪಿಯೋನ್) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

Telegram Group

 

ಇಲಾಖೆ ಹೆಸರು: ಉಡುಪಿ ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಹೆಸರು: 17
ಒಟ್ಟು ಹುದ್ದೆಗಳು  17 ಹುದ್ದೆಗಳ ಭರ್ತಿ
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ವಿದ್ಯಾರ್ಹತೆ:
ಅಭ್ಯರ್ಥಿಗಳು 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ಲಘು ವಾಹನ ಚಾಲನಾ ಲೈಸೆನ್ಸ್ ಐಚ್ಚಿಕ

ವಯೋಮಿತಿ:
ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ,
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ,
ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

 

 

ವೇತನಶ್ರೇಣಿ:
ಉಡುಪಿ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 28,950 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ರೂ. 200 ಶುಲ್ಕ ಪಾವತಿಸಬೇಕು. ಪ.ಜಾತಿ, ಪ.ಪಂ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳು ರೂ. 100 ಶುಲ್ಕ ಪಾವತಿಸಬೇಕು.

(ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಉಡುಪಿ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.)

ಆಯ್ಕೆ ವಿಧಾನ 
10ನೇ ತರಗತಿ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ 1:10ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಉದ್ಯೋಗ  ಸ್ಥಳ :
ಉಡುಪಿ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಮಾರ್ಚ್ 29, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಮೇ 05, 2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

 

Telegram Group
error: Content is protected !!