September 22, 2023

SSLC ಪಾಸಾದವರಿಗೆ ಗ್ರಾಮ ಪಂಚಾಯಿತಿ ನೇರ ನೇಮಕಾತಿ 2022 । Gram Panchayat Gram Kayak Mitra Recruitment 2022

ಗ್ರಾಮ ಪಂಚಾಯಿತಿ ನೇರ  ನೇಮಕಾತಿ ಅಧಿಸೂಚನೆ 2022

Gram Panchayat Gram Kayak Mitra Recruitment 2022: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಒಟ್ಟು 10 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಗ್ರಾಮ ಕಾಯಕ ಮಿತ್ರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ಗ್ರಾಮ ಪಂಚಾಯಿತಿ
ಹುದ್ದೆಗಳ ಹೆಸರು: ಗ್ರಾಮ ಕಾಯಕ ಮಿತ್ರ
ಒಟ್ಟು ಹುದ್ದೆಗಳು  10
ಅರ್ಜಿ ಸಲ್ಲಿಸುವ ಬಗೆ   

 

ವಿದ್ಯಾರ್ಹತೆ:
ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಜೊತೆಗೆ ಓದು, ಬರಹ ಚೆನ್ನಾಗಿ ತಿಳಿದಿರಬೇಕು.

ವಯೋಮಿತಿ:
ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ ದಿನಾಂಕ 01/01/2022ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು.

ವೇತನಶ್ರೇಣಿ:
ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 6000 ಗೌರವಧನ ಹಾಗೂ ಕಾರ್ಯನಿರ್ವಹಣೆ ಆಧರಿಸಿ ರೂ. 5000 ಪ್ರೋತ್ಸಾಹಧನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ 
10ನೇ ತರಗತಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳಲ್ಲಿ ಶೇ. 50ರಷ್ಟನ್ನು ಪರಿಗಣಿಸುವುದು. ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ ಅಕುಶಲ ಕೂಲಿ ನಿರ್ವಹಿಸಿದ ಸರಾಸರಿ ಮಾನವದಿನಗಳಿಗೆ 20 ಅಂಕಗಳನ್ನು ನೀಡಲಾಗುವುದು. ಅಭ್ಯರ್ಥಿಯು ಯೋಜನೆಯಡಿ ಕಾಯಕ ಬಂಧುವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಪ್ರತಿ ವರ್ಷ ಅನುಭವಕ್ಕೆ ತಲಾ 05 ಅಂಕಗಳಂತೆ ಗರಿಷ್ಠ 20 ಅಂಕಗಳು. ಅಭ್ಯರ್ಥಿಗಳು ಪ.ಜಾತಿ, ಪ.ಪಂಗಡಕ್ಕೆ ಸೇರಿದ್ದಲ್ಲಿ 10 ಅಂಕಗಳು.

ಉದ್ಯೋಗ ಸ್ಥಳ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಗ್ರಹಾರ, ತಾರಾನಗರ, ಬಂಡ್ರಿ, ತಾಳೂರು, ಸೋವೇನಹಳ್ಳಿ, ಅಂತಾಪುರ, ಭುಜಂಗನಗರ, ಹೆಚ್.ಕೆ.ಹಳ್ಳಿ, ಮೆಟ್ರಿಕಿ, ದರೋಜಿ ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಮೇ 20, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಮೇ 27, 2022
   
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
Telegram Group
error: Content is protected !!