December 8, 2022

SSLC ಆದವರಿಗೆ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ 2022

ತುಮಕೂರು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ 2022

Tumkur Zilla Panchayat Recruitment 2022: ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ತುಮಕೂರು ಜಿಲ್ಲಾ ಪಂಚಾಯತ್ 
ಹುದ್ದೆಗಳ ಹೆಸರು: ಆಡಳಿತ ಸಹಾಯಕರು, ಲೆಕ್ಕ ಸಹಾಯಕರು, ಬಹುಸಹಾಯಕ ಕೆಲಸಗಾರ
ಒಟ್ಟು ಹುದ್ದೆಗಳು  5
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ಹೆಸರು  ಹುದ್ದೆಗಳ ಸಂಖ್ಯೆ 
ಆಡಳಿತ ಸಹಾಯಕ  01 ಹುದ್ದೆ 
ಲೆಕ್ಕ ಸಹಾಯಕ  01 ಹುದ್ದೆ 
ಬಹುಸಹಾಯಕ ಕೆಲಸಗಾರ  03 ಹುದ್ದೆ 

 

ವಿದ್ಯಾರ್ಹತೆ

ಆಡಳಿತ ಸಹಾಯಕರು ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಮತ್ತು ಕೌಶಲ್ಯ ಇರಬೇಕು. ಕನಿಷ್ಠ 3 ವರ್ಷಗಳು ಸರ್ಕಾರ ಅಥವಾ ಇತರೆ ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕು.

ಲೆಕ್ಕ ಸಹಾಯಕ ಹುದ್ದೆಗೆ ಬಿ.ಕಾಂ. ಪದವಿ ಹೊಂದಿರಬೇಕು. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಮತ್ತು ಕೌಶಲ್ಯ ಇರಬೇಕು. ಕನಿಷ್ಠ 3 ವರ್ಷಗಳು ಸರ್ಕಾರ ಅಥವಾ ಇತರೆ ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಟ್ಯಾಲಿ ತಂತ್ರಾಂಶ ಬಳಸಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕು.

ಬಹುಸಹಾಯಕ ಕೆಲಸಗಾರ ಹುದ್ದೆಗೆ ಕನಿಷ್ಠ 10ನೇ ತರಗತಿ ಪೂರ್ಣಗೊಂಡಿರಬೇಕು. ಕನಿಷ್ಠ 3 ವರ್ಷಗಳ ಸರ್ಕಾರ ಅಥವಾ ಇತರೆ ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕು. 

ವಯೋಮಿತಿ:
ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಗರಿಷ್ಠ 45 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ದಿನಾಂಕ ಜೂನ್ 21, 2022 ಕ್ಕೆ 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ:
ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಮೆರಿಟ್ ಪಟ್ಟಿ ತಯಾರಿಸಿ, ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸರ್ಕಾರ ನಿಗದಿಪಡಿಸಿರುವ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಜೂನ್ 15, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಜೂನ್ 21, 2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

 

Telegram Group
error: Content is protected !!