November 29, 2022

KPTCL ನೇಮಕಾತಿ ಪ್ರಕಟಣೆ : ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ

Telegram Group

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯ (ಕೆಪಿಟಿಸಿಎಲ್) ವಿವಿಧ 1492 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕೆಪಿಟಿಸಿಎಲ್‌ನ ಇದೀಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಇಎ ವೆಬ್‌ಸೈಟ್‌ನಲ್ಲಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಅಪ್‌ಲೋಡ್‌ ಮಾಡಿದೆ.

ಪರೀಕ್ಷೆ ವೇಳಾಪಟ್ಟಿ ಈ ಕೆಳಗಿನಂತಿದೆ.
ಸಹಾಯಕ ಇಂಜಿನಿಯರ್ (ವಿದ್ಯುತ್), (ಸಿವಿಲ್) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 23-07-2022 (ಮಧ್ಯಾಹ್ನ 2-30 ರಿಂದ 4-30 ರವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು ಮಾತ್ರ ಪರೀಕ್ಷೆ ಕೇಂದ್ರವಾಗಿರುತ್ತದೆ.

ಕಿರಿಯ ಇಂಜಿನಿಯರ್ (ವಿದ್ಯುತ್)ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 24-07-2022 (ಬೆಳಿಗ್ಗೆ 10-30ರಿಂದ 12-30 ಗಂಟೆವರೆಗೆ)
ಕಿರಿಯ ಇಂಜಿನಿಯರ್ ( ಸಿವಿಲ್) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 24-07-2022 (ಮಧ್ಯಾಹ್ನ 2-30 ರಿಂದ 4-30 ರವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು ಮಾತ್ರ ಪರೀಕ್ಷೆ ಕೇಂದ್ರವಾಗಿರುತ್ತದೆ.

ಕಿರಿಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆ ದಿನಾಂಕ: 07-08-2022 ( (ಬೆಳಿಗ್ಗೆ 10-30ರಿಂದ 12-30 ಗಂಟೆವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಕನ್ನಡ ಭಾಷಾ ಪರೀಕ್ಷೆಯ ದಿನಾಂಕ : 07-08-2022 (ಮಧ್ಯಾಹ್ನ 2-00 ರಿಂದ 05-00 ಗಂಟೆ ರವರೆಗೆ)
ಈ ಪರೀಕ್ಷೆಯನ್ನು 150 ಅಂಕಗಳಿಗೆ ನೀಡಲಾಗುತ್ತದೆ.

ಕೆಪಿಟಿಸಿಎಲ್‌ ನ ಈ ಕೆಳಗಿನ ಸಂಖ್ಯೆ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ.
ಸಹಾಯಕ ಇಂಜಿನಿಯರ್ ( ವಿದ್ಯುತ್ ): 505
ಸಹಾಯಕ ಇಂಜಿನಿಯರ್ ( ಸಿವಿಲ್) : 28
ಕಿರಿಯ ಇಂಜಿನಿಯರ್ (ವಿದ್ಯುತ್) : 570
ಕಿರಿಯ ಇಂಜಿನಿಯರ್ ( ಸಿವಿಲ್): 29
ಕಿರಿಯ ಸಹಾಯಕ : 360
ಒಟ್ಟು ಹುದ್ದೆಗಳ ಸಂಖ್ಯೆ : 1492

ಕೆಪಿಟಿಸಿಎಲ್ ಹುದ್ದೆಗಳಿಗೆ ಅಧಿಸೂಚಿಸಿ, ಅರ್ಜಿ ಸ್ವೀಕರಿಸಿದ ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಪ್ರಾರಂಭಿಕ ದಿನಾಂಕ : 07-02-2022
ಅರ್ಜಿ ಸಲ್ಲಿಸಲು ನೀಡಿದ್ದ ಕೊನೆ ದಿನಾಂಕ : 07-03-2022
ಶುಲ್ಕ ಪಾವತಿಗೆ ನೀಡಿದ್ದ ಕೊನೆ ದಿನಾಂಕ : 09-03-2022

ಪರೀಕ್ಷೆಗೆ ಒಂದು ವಾರ ಮುಂಚಿತವಾಗಿಯೇ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ರಿಜಿಸ್ಟ್ರೇಷನ್‌ ನಂಬರ್ ನೀಡಿ ಲಾಗಿನ್‌ ಆಗುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

Telegram Group
error: Content is protected !!