September 30, 2023

ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ 

ಸಮಾಲೋಚಕರು, ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ 

WCD Tumkur Recruitment 2022 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ವಹಣೆ ಹಾಗೂ ನಿಗಮದ ಯೋಜನೆ ಕುರಿತು ಅರಿವು ಮೂಡಿಸಲು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ಹೆಸರು: ಸಮಾಲೋಚಕರು, ಕ್ಲರ್ಕ್/ ಕಂಪ್ಯೂಟರ್ ಆಪರೇಟರ್
ಒಟ್ಟು ಹುದ್ದೆಗಳು  ತಿಳಿಸಿಲ್ಲ 
ಅರ್ಜಿ ಸಲ್ಲಿಸುವ ಬಗೆ  ಆಫ್ಲೈನ್ 

  • ವಿದ್ಯಾರ್ಹತೆ:
    ಸಮಾಲೋಚಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಎಸ್.ಡಬ್ಲ್ಯು/ ಮಹಿಳಾ ಅಧ್ಯಯನದಲ್ಲಿ ಎಂ.ಎ ಪದವಿ ತೇರ್ಗಡೆ ಹೊಂದಿದ್ದು, ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 3 ರಿಂದ 5 ವರ್ಷಗಳ ಅನುಭವ (ಪ್ರಮಾಣ ಪತ್ರ ಸಲ್ಲಿಸಬೇಕು) ಹೊಂದಿರಬೇಕು. ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಾಮರ್ಥ್ಯ ಇರಬೇಕು.
  • ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು, ಎಲ್ಲ ಯೋಜನೆಗಳ ಕೆಲಸ ಕಾರ್ಯಗಳನ್ನು ಮಾಡಲು ಸಾಮರ್ಥ್ಯ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ (ಪ್ರಮಾಣಪತ್ರ ಸಲ್ಲಿಸಬೇಕು) ಹೊಂದಿರಬೇಕು.

ವೇತನಶ್ರೇಣಿ:
ಸಮಾಲೋಚಕರ ಹುದ್ದೆಗೆ 12 ಸಾವಿರ ಗೌರವಧನ ಮತ್ತು 2 ಸಾವಿರ ರೂ.ಗಳ ಪ್ರಯಾಣಭತ್ಯೆ ನೀಡಲಾಗುವುದು. ಕ್ಲರ್ಕ್/ಕಂಪ್ಯೂಟರ್ ಆಪರೇಟರ್ ಹುದ್ದೆಗೆ 10 ಸಾವಿರವನ್ನು ಗೌರವಧನವಾಗಿ ನೀಡಲಾಗುವುದು.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವಂತಹ ಉದ್ಯೋಗಾಕಾಂಷಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0816-2272590

ಪ್ರಮುಖ ದಿನಾಂಕಗಳು
ಕಚೇರಿಯಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ ಜುಲೈ 30, 2022
ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 08, 2022
   
Telegram Group
error: Content is protected !!