September 22, 2023

BBMP ನೇಮಕಾತಿ ಅಧಿಸೂಚನೆ 2022 : ಗ್ರೂಪ್ ಎ ಮತ್ತು ಗ್ರೂಪ್ ಬಿ  ಹುದ್ದೆಗಳು

Telegram Group

BBMP Recruitment 2022: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಗತ್ಯ ಇರುವ ಗ್ರೂಪ್‌ ಎ ಹಾಗೂ ಗ್ರೂಪ್‌ ಬಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನೇಮಕ ಅಧಿಸೂಚನೆ ಬಿಡುಗಡೆ ಆಗಿದೆ. ಬಿಬಿಎಂಪಿ’ಯ ಸಹಾಯಕ ಶಸ್ತ್ರ ಚಿಕಿತ್ಸಕರು (ಲೇಡಿ ಮೆಡಿಕಲ್ ಆಫೀಸರ್) ಮತ್ತು ತಮಿಳು ಉಪನ್ಯಾಸಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಗಳ ಹೆಸರು: ಗ್ರೂಪ್ ಎ ಮತ್ತು ಗ್ರೂಪ್ ಬಿ 
ಒಟ್ಟು ಹುದ್ದೆಗಳು  4
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ಗ್ರೂಪ್‌ ಎ ಹುದ್ದೆಗಳು
ಬಿಬಿಎಂಪಿ’ಯ ಸಹಾಯಕ ಶಸ್ತ್ರ ಚಿಕಿತ್ಸಕರು (ಲೇಡಿ ಮೆಡಿಕಲ್ ಆಫೀಸರ್) : 01 (ಬ್ಯಾಲಾ)

ಗ್ರೂಪ್‌ ಬಿ ಹುದ್ದೆಗಳು
ಬಿಬಿಎಂಪಿ’ಯ ತಮಿಳು ಉಪನ್ಯಾಸಕರು : 03 (ಬ್ಯಾಲಾ)

ವಿದ್ಯಾರ್ಹತೆ:
ಬಿಬಿಎಂಪಿ’ಯ ಸಹಾಯಕ ಶಸ್ತ್ರ ಚಿಕಿತ್ಸಕರು (ಲೇಡಿ ಮೆಡಿಕಲ್ ಆಫೀಸರ್) : ಎಂಬಿಬಿಎಸ್ ಪದವಿ (ಎಂಸಿಐ / ಕೆಎಂಸಿ ರಿಜಿಸ್ಟ್ರೇಷನ್‌ ಪಡೆದಿರಬೇಕು)
ಬಿಬಿಎಂಪಿ’ಯ ತಮಿಳು ಉಪನ್ಯಾಸಕರು : ತಮಿಳು ವಿಷಯದಲ್ಲಿ ಸ್ನಾತಕೋತ್ತರ ಪದವಿ ಜತೆಗೆ 3 ವರ್ಷ ಬೋಧನೆ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ:
ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 40 ವರ್ಷ ಮೀರಿರಬಾರದು.

ವೇತನಶ್ರೇಣಿ:
ಬಿಬಿಎಂಪಿ’ಯ ಸಹಾಯಕ ಶಸ್ತ್ರ ಚಿಕಿತ್ಸಕರು (ಲೇಡಿ ಮೆಡಿಕಲ್ ಆಫೀಸರ್) ಹುದ್ದೆಗಳಿಗೆ ಮಾಸಿಕ: ರೂ.52,650 – ರೂ.97100.
ಬಿಬಿಎಂಪಿ’ಯ ತಮಿಳು ಉಪನ್ಯಾಸಕರು : ರೂ.43,100-ರೂ.83900

ಆಯ್ಕೆ ವಿಧಾನ:
ಈ ಮೇಲಿನ ಸದರಿ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡಾವಾರನ್ನು ಆಧರಿಸಿ 18 ವರ್ಷದಿಂದ 28 ವರ್ಷ ವಯೋಮಿತಿಯುಳ್ಳ (29 ವರ್ಷದೊಳಗಿನವರು) ಅಭ್ಯರ್ಥಿಗಳ ಒಂದು ಜ್ಯೇಷ್ಠತಾ ಪಟ್ಟಿಯನ್ನು ಹಾಗೂ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಇನ್ನೊಂದು ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಇದರ ಆಧಾರದಂತೆ ಆಯ್ಕೆ ಮಾಡಲಾಗುವುದು.

ಆಯ್ಕೆ ಮಾಡುವಾಗ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಜ್ಯೇಷ್ಠತಾ ಪಟ್ಟಿಯಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  14-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  14-10-2022
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 15-10-2022
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

Telegram Group
error: Content is protected !!