December 8, 2022

10ನೇ ಪಾಸಾದವರಿಗೆ ಭರ್ಜರಿ ನೇಮಕಾತಿ – 24,369 ಹುದ್ದೆಗಳು – SSC Recruitment 2022

10th ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ: 24,369 ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಭರ್ಜರಿ ಉದ್ಯೋಗ ಆಫರ್ ನೀಡಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬರೋಬರಿ 24,369 ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group

ಇಲಾಖೆ ಹೆಸರು: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್
ಹುದ್ದೆಗಳ ಹೆಸರು: ಕಾನ್ಸ್ಟೇಬಲ್ 
ಒಟ್ಟು ಹುದ್ದೆಗಳು – 24,369
ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್ 

ಗಡಿ ಭದ್ರತಾ ಪಡೆ  – 10497 ಹುದ್ದೆಗಳು 
ಕೇಂದ್ರ ಕೈಗಾರಿಕಾ ಭದ್ರತಾ ಪಡೆ – 100 ಹುದ್ದೆಗಳು 
ಸಶಸ್ತ್ರ ಸೀಮಾ ಬಲ್ – 1284 ಹುದ್ದೆಗಳು 
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ – 1613 ಹುದ್ದೆಗಳು 
ಅಸ್ಸಾಂ ರೈಫಲ್ಸ್‌ – 1697 ಹುದ್ದೆಗಳು 
ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್‌ – 103 ಹುದ್ದೆಗಳು 

ವಿದ್ಯಾರ್ಹತೆ:
ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣ.

ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯೋಮಿತಿ: 23 ವರ್ಷ.
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ನೀಡಲಾಗಿದೆ.

ವೇತನಶ್ರೇಣಿ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,700 ರಿಂದ ರೂ. 69,100 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ

ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.100.
ಎಸ್ಸಿ, ಎಸ್ಟಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಪ್ಲಿಕೇಶನ್‌ ಶುಲ್ಕವನ್ನು ನೆಟ್‌ಬ್ಯಾಂಕಿಂಗ್, ಎಸ್‌ಬಿಐ ಚಲನ್, ಕ್ರೆಡಿಟ್ ಕಾರ್ಡ್‌, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 27-10-2022
ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 30-11-2022 ರ ರಾತ್ರಿ 11 ಗಂಟೆವರೆಗೆ.
ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-12-2022 ರ ರಾತ್ರಿ 11 ಗಂಟೆವರೆಗೆ.
ಚಲನ್‌ ಮೂಲಕ ಅಪ್ಲಿಕೇಶನ್‌ ಶುಲ್ಕ ಪಾವತಿಸಲು ಕೊನೆ ದಿನಾಂಕ : 30-11-2022
ಟೈಯರ್‌-1 ಸಿಬಿಟಿ ಪರೀಕ್ಷೆ ದಿನಾಂಕ: ಜನವರಿ 2023

ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

Telegram Group
error: Content is protected !!